ಗಂಡ ಊರಿಗೆ ಹೋದಾಗ
Posted date: 13 Thu, Oct 2016 – 09:31:31 AM

ಪುಣ್ಯ ಫಿಲಂಮ್ಸ್ ಬ್ಯಾನರ್ ಅಡಿಯಲ್ಲಿ "ಗಂಡ ಊರಿಗ್ ಹೋದಾಗ" ಎನ್ನುವ ಚಿತ್ರ ಚಾಲನೆಗೊಂಡಿದೆ. ನವರಾತ್ರಿಯ ಕೊನೆಯ ದಿನ ದೇವನಹಳ್ಳಿ ಬಳಿಯ ಆಂಜನೇಯ ದೇವಾಲಯದಲ್ಲಿ ಚಿತ್ರದ ಮುಹೋರ್ತ ನಡೆಯಿತು. ಸಿನೆಮಾ ಪತ್ರಕರ್ತ ವಿ.ಸಿ.ಎನ್. ಮಂಜುರಾಜ್ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ರಂಗಾಯಣ ರಘ ನೀತು ಸಿಂಧೂರಾವ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಐಸ್ ಪೈಸ್ ಚಿತ್ರವನ್ನು ನಿರ್ದೇಶನ ಮಾಡಿದ್ದ ನಿರ್ದೆಶಕ ಸಾಯಿಕೃಷ್ಣ ತನ್ನ ಎರಡನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಹೆಸರು "ಗಂಡ ಊರಿಗ್ ಹೋದಾಗ" ಚಿತ್ರದ ಟೈಟಲ್ ಕೇಳುತ್ತಿದ್ದಂತೆ ಎಲ್ಲಾರಲ್ಲೂ ಕುತೂಹಲ ಮೂಡುವುದು ಸಹಜ ಆದರೆ ಚಿತ್ರದ ಕಥೆ ಬಹಳ ವಿಭಿನ್ನಶ್ಯಲಿಯ ಅನುಭವ ನೀಡುತ್ತದೆ ಹಾಗೂ ಇದು ಇಂದಿನ ಸಮಾಜಕ್ಕೆ ಅಂಟಿರುವ ದೊಡ್ಡ ಪಿಡುಗಿಗೆ ಸಂಭಂಧಪಟ್ಟ ಕಥೆ ಇದಾಗಿದೆ. ಪ್ರೇಕ್ಷಕರು ಚಿತ್ರ ಮಂದಿರಿದಿಂದ ಹೊರಗೆ ಬರುವಾಗ ಖಷಿಯಿಂದ ಬರುತ್ತಾನೆ. ಇದೊಂದು ಮಾರಲ್,ಸೆಂಟಿಮೆಂಟ್ ಕಾಮಿಡಿ ಚಿತ್ರ ಎನ್ನುತ್ತಾರೆ ನಿರ್ದೇಶಕ ಸಾಯಿಕೃಷ್ಣ.             ಪುಣ್ಯ ಫಿಲಂಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ಜಗದೀಶ್ ,ಜಾನ್,ಹಾಗೂ ಕಿರಣ್ ರಾಜು ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.ಬೆಂಗಳೂರು ಮತ್ತು ಬೆಂಗಳೂರಿನ ಸುತ್ತಾ ಮುತ್ತಾ ಹಾಗೂ ನಂದಿಬೆಟ್ಟ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲು ಚಿತ್ರ ತಂಡ ಸಿದ್ದ ಮಾಡಿಕೊಂಡಿದೆ.
ಕಥೆ ಚಿತ್ರಕಥೆ ಸಾಯಿಕೃಷ್ಣ ಸಿದ್ದಪಡಿಸಿದ್ದಾರೆ  ತಬಲನಾಣಿ ಹಾಗೂ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ. ಛಾಯಗ್ರಾಹಣದ ಜವಬ್ದಾರಿ ಹೋತ್ತಿರುವುದು ರಮೇಶ್‌ಕೋಯಿರಾ ,ಸಂಗೀತ ನೀಡಿರುವುದು ಅರುಣ್ ಆಂಡ್ರೋ, ಥ್ರಿಲ್ಲರ್ ಮುಂಜು ಸಾಹಸವಿದ್ದರೆ .ಸಂಕಲನದ ಕಾರ್ಯ ಶಿವಪ್ರಸಾದ್‌ಯಾದವ್ ಮಾಡುತ್ತಿದ್ದಾರೆ.                                 ಚಿತ್ರದ ಹಾಡುಗಳು ಈಗಾಗಲೇ ಸಿದ್ಧಗೊಂಡಿದ್ದು ಈಗಾಗಲೇ ಬೆಂಗಳೂರು ೨೩ ಚಿತ್ರಕ್ಕೆ ಸಂಗೀತ ನೀಡಿದ್ದ ಸಂಗೀತ ನಿರ್ದೇಶಕ ಅರುಣ್ ಆಂಡ್ರೋ ಬಹಳ ಅಚ್ಚುಕಟ್ಟಾಗಿ ಸಂಗೀತದ ಕಾರ್ಯ ನಿರ್ವಹಿಸಿದ್ದಾರೆ.
ಕಲಾವಿಧರಾಗಿ ಐಸ್ ಪೈಸ್ ಚಿತ್ರದ ನಾಯಕಿ ಸಿಂಧುರಾವ್ ಮತ್ತೆ ಈಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ ಜೊತೆಗೆ ,ಅನುಗೌಡ, ರಾಧಿಕ,  ಸ್ಚಪ್ನ, ಸುಮ ಇವರು ಗಂಡ ಊರಿಗ್ ಹೋದಾಗ ಎನಾಗಲಿದೆ ಎನ್ನುವ ಕುತೂಹಲಕ್ಕೆ ಸಾಕ್ಷಿಯಾಗಿದ್ದಾರೆ. ಹಾಗೂ ತಬಲ ನಾಣಿ ಕೂಡ ಅಭಿನಯಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed